ಮಾಸ್ಕ್ - ಸ್ಯಾನಿಟೈಸರ್ ಹಂಚಿ ಮಾಜಿ ಸಚಿವರ ಜಾಗೃತಿ - ಮಾಜಿ ಸಚಿವ ಸಿ.ಎಸ್. ಪುಟ್ಟರಾಜು
ಕೊರೊನಾ ಬಗ್ಗೆ ಮಾಜಿ ಸಚಿವ, ಶಾಸಕ ಸಿ.ಎಸ್. ಪುಟ್ಟರಾಜು ಪಾಂಡವಪುರದಲ್ಲಿ ಜನ ಜಾಗೃತಿ ಮೂಡಿಸುವುದರೊಂದಿಗೆ ಜನರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಂಚಿ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪಾಂಡವ ಪುರದಲ್ಲಿ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಮಾಜಿ ಸಚಿವರು ಸಾಥ್ ನೀಡಿದ್ದಾರೆ. ಇತ್ತ ಕೆ.ಆರ್.ಪೇಟೆಯಲ್ಲಿ ಕುಂಚ ಕಲಾವಿದರು ರಸ್ತೆಗಳಲ್ಲಿ ಬಣ್ಣ ಹಾಗೂ ಚಿತ್ರ ಬಿಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.