ಕಿರುತೆರೆಗೆ ಎಂಟ್ರಿ ಕೊಟ್ಟ ಪುಟ್ಮಲ್ಲಿ! ಹಲವು ವಿಷಯಗಳ ಬಗ್ಗೆ ಈಟಿವಿ ಭಾರತದ ಜೊತೆ ಉಮಾಶ್ರೀ ಮಾತು - ಮಾಜಿ ಸಚಿವೆ ಉಮಾಶ್ರೀ
ಕನ್ನಡ ಚಿತ್ರರಂಗದಲ್ಲಿ ಸಣ್ಣ ಪಾತ್ರದಿಂದ ಹಿಡಿದು ದೊಡ್ಡ ಸ್ಟಾರ್ ನಟರ ಜೊತೆ ಅಭಿನಯಿಸಿರುವ ನಟಿ ಉಮಾಶ್ರೀ, ಬರೋಬ್ಬರಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಆರತಿಗೊಬ್ಬ ಕೀರ್ತಿಗೊಬ್ಬ ಎಂಬ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಉಮಾಶ್ರೀ, ಸ್ವಲ್ಪ ದಿನ ರಾಜಕೀಯದಿಂದ ಯಾಕೆ ದೂರ ಉಳಿದಿದ್ರು? ಮಂತ್ರಿಯಾಗಿದ್ದಾಗ ಉಮಾಶ್ರೀಗೆ ಎಷ್ಟು ಸಿನಿಮಾಗಳ ಆಫರ್ ಬಂದಿದ್ವು? ಅಷ್ಟು ದೊಡ್ಡ ನಟಿಯಾಗಿದ್ರೂ ಕೂಡ ಈಗ ಕಿರುತೆರೆಗೆ ಬರುವ ಅವಶ್ಯಕತೆ ಏನು ಇತ್ತು? ಉಮಾಶ್ರೀ ಬಿಡುವಿನ ವೇಳೆ ಏನು ಮಾಡುತ್ತಾರೆ? ಹೀಗೆ ಹಲವು ವಿಚಾರಗಳ ಬಗ್ಗೆ ಉಮಾಶ್ರೀ 'ಈಟಿವಿ ಭಾರತ' ಜೊತೆ ಮಾತನಾಡಿದ್ದಾರೆ.