ರಾತ್ರಿ ಕರ್ಫ್ಯೂ ವಾಹನ ಬ್ಲಾಕ್ ತೆರವು ಮಾಡಿಸಿದ ರಮಾನಾಥ ರೈ: ವಿಡಿಯೋ ವೈರಲ್ - ವಾಹನ ಬ್ಲಾಕ್ ತೆರವು ಮಾಡಿಸಿದ ಮಾಜಿ ಸಚಿವ ರಮಾನಾಥ ರೈ
ಮಂಗಳೂರು: ಮಾಜಿ ಸಚಿವ ರಮಾನಾಥ ರೈ ನಿನ್ನೆ ರಾತ್ರಿ ಪೊಲೀಸ್ ಬಂದೋಬಸ್ತ್ನಲ್ಲಿ ರಸ್ತೆ ಬ್ಲಾಕ್ ಮಾಡಿರೋದನ್ನು ತೆರವುಗೊಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ನಿನ್ನೆಯಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಆದರೆ ನಗರದ ಪಡೀಲ್ ಬಳಿ ರಮಾನಾಥ ರೈ ವಾಹನದಲ್ಲಿ ಬರುತ್ತಿರುವ ವೇಳೆ ಪೊಲೀಸರು ಎಲ್ಲ ವಾಹನಗಳನ್ನು ಬ್ಯಾರಿಕೇಡ್ ಬಳಸಿ ನಿಲ್ಲಿಸಿದ್ದರು. ತಕ್ಷಣ ಅವರು ವಾಹನದಿಂದ ಇಳಿದು ನಿಲ್ಲಿಸಿದ್ದ ವಾಹನಗಳನ್ನು ಹೋಗಲು ಬಿಡುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಇದನ್ನು ಯಾರೋ ವಿಡಿಯೋ ಮಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.