ಅನರ್ಹ ಶಾಸಕರ ಸ್ಪರ್ಧೆಯಿಂದ ಸಂವಿಧಾನಕ್ಕೆ ದೊಡ್ಡ ಅಪಮಾನ: ಎಂ.ಬಿ. ಪಾಟೀಲ್ - kagawad Congress candidate raju kage nomination news
ಬೆಳಗಾವಿ ಜಿಲ್ಲೆಯ ಅಥಣಿ ತಹಶಿಲ್ದಾರ್ ಕಚೇರಿಯಲ್ಲಿ ಕಾಗವಾಡ ವಿಧಾನ ಸಭಾಕ್ಷೇತ್ರದ ರಾಜು ಕಾಗೆ, ಅಥಣಿ ಕ್ಷೇತ್ರದ ಗಜಾನನ ಮಂಗಸೂಳಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲಲ್ ಅವರು, ಇದು ಅವಶ್ಯಕತೆ ಇರದ ಉಪಚುನಾವಣೆ. ಅನರ್ಹ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಿರುವುದೇ ಸಂವಿಧಾನಕ್ಕೆ ಮಾಡಿರುವ ದೊಡ್ಡ ಅಪಮಾನ ಎಂದು ಜರಿದರು. ಜನಸಾಮಾನ್ಯರ ತೆರಿಗೆ ಹಣ ಈ ಉಪಚುನಾವಣೆಗೆ ವ್ಯಯವಾಗುತ್ತಿದೆ. ಎಲ್ಲ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಎಂ ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ರು.