ಮತದಾರರನ್ನ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ : ಮಾಜಿ ಸಚಿವೆ ಜಯಮಾಲಾ - latest haveri jayamala news
ಮತದಾರರನ್ನ ಹಣದಿಂದ ಕೊಂಡುಕೊಳ್ಳಬಹುದು ಅಂತಾ ತಿಳಿದಿದ್ರೆ ಅದು ಆಗೋದಿಲ್ಲ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಮಾತನಾಡಿದ ಜಯಮಾಲಾ, ರಾಜ್ಯದ ಜನರು ಸ್ವಾಭಿಮಾನಿಗಳು, ಮತದಾರರನ್ನ ಧರ್ಮದಿಂದ ಕೊಂಡುಕೊಳ್ಳಬಹುದೆಂದು ಹೇಳಿದರು. ಪಕ್ಷ ತೊರೆದು ಹೋಗೋದು, ಕಾನೂನು ಮೀರಿ ಹೋಗೋದನ್ನ ಜನರು ಒಪ್ಪೋದಿಲ್ಲ, ಅನರ್ಹರಿಗೆ ತಕ್ಕ ಪಾಠ ಕಲಿಸಬೇಕಿದೆಯೆಂದು ಹೇಳಿದರು.