ಕರ್ನಾಟಕ

karnataka

ETV Bharat / videos

ಚಿಂಚನಸೂರ್‌ ದಂಪತಿ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ.. ಆದರೆ, ಅದಕ್ಕೂ ಮೊದಲು.. - ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿಕೆ

By

Published : Jan 15, 2020, 6:26 PM IST

ಹಾವೇರಿ ತಾಲೂಕಿನ ನರಸೀಪುರದಲ್ಲಿ ನಡೆಯುತ್ತಿರುವ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚೌಡಯ್ಯ ಸಮಾಜವನ್ನ ಎಸ್​ಟಿಗೆ ಸೇರಿಸಲೆಂದೇ ಯಡಿಯೂರಪ್ಪ ಹುಟ್ಟಿ ಬಂದಿದ್ದಾರೆ. ಸಮಾಜವನ್ನು ಎಸ್​ಟಿಗೆ ಸೇರಿಸಿದ್ರೆ ಚಿಂಚನಸೂರ ದಂಪತಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ. ನಾವು ಅಂಬಿಗರು ನಂಬಿಗಸ್ಥರು. ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್ ಶಾ ಭೇಟಿ ಮಾಡಿ ಚೌಡಯ್ಯ ಸಮಾಜವನ್ನು ಎಸ್​ಟಿಗೆ ಸೇರಿಸಿ ಅಂತಾ ಸಿಎಂಗೆ ಬಾಬುರಾವ್‌ ಚಿಂಚನಸೂರ್‌ ಮನವಿ ಮಾಡಿದ್ದಾರೆ.

ABOUT THE AUTHOR

...view details