ಕರ್ನಾಟಕ

karnataka

ETV Bharat / videos

ಶ್ರೀರಂಗಪಟ್ಟಣಕ್ಕೆ ಹೆಚ್​ಡಿಕೆ ಆಗಮನ : ವಿವಿಧ ಕಾಮಗಾರಿಗೆಳಿಗೆ ಶಂಕು ಸ್ಥಾಪನೆ ನೆರವೇರಿಸಲಿರುವ ಮಾಜಿ ಸಿಎಂ - ಶ್ರೀರಂಗಪಟ್ಟಣಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗಮನ

By

Published : Jan 10, 2021, 1:47 PM IST

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರವಾಸ ಕೈಗೊಂಡಿದ್ದು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಗರದ ಹೊರ ವಲಯದಿಂದಲೂ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ದಾರಿಯುದ್ದಕ್ಕೂ ಅದ್ಧೂರಿ ಸ್ವಾಗತ ಕೋರುತ್ತಿದ್ದು, ಊರು ಊರಲ್ಲೂ ಪಟಾಕಿ ಸಿಡಿಸಿ ಹಾರ ತುರಾಯಿ ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಕ್ಷೇತ್ರದಾದ್ಯಂತ ದಳಪತಿಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಕುಮಾರಸ್ವಾಮಿ ಪರ ಜೈಕಾರ ಘೋಷಣೆ ಮೊಳಗಿದವು.

ABOUT THE AUTHOR

...view details