ಕರ್ನಾಟಕ

karnataka

ETV Bharat / videos

ಮೊಸಳೆ ಹಿಡಿಯಲು ಬೋನ್‌, ಬಲೆ‌ ಇರಿಸಿದ ಅಧಿಕಾರಿಗಳು... ಇದು ಈಟಿವಿ ಭಾರತದ ಫಲಶೃತಿ - ರಾಯಚೂರಿನ ಹೊಸೂರು ಗ್ರಾಮದಲ್ಲಿ ಮೊಸಳೆ

By

Published : Nov 5, 2019, 8:31 PM IST

ರಾಯಚೂರಿನ ಹೊಸೂರು ಗ್ರಾಮದಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕದ ಬಳಿ ಕಾಣಿಸಿಕೊಂಡಿರುವ ಬೃಹತ್ ಆಕಾರದ ಮೊಸಳೆಯನ್ನು ಸೆರೆ ಹಿಡಿಯಲು ‌ಬೋನ್‌ ಹಾಗೂ ಬಲೆ‌ ಇರಿಸಲಾಗಿದೆ. ಈ ಮೊದಲು ಮೊಸಳೆ ಕಾಣಿಸಿಕೊಂಡ ವಿಚಾರವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಕುರಿತು 'ರಾಯಚೂರು ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಮೊಸಳೆ ಹೆಜ್ಜೆಗುರುತು.. ಬೆಚ್ಚಿಬಿದ್ದ ನಾಗರಿಕರು' ಎಂದು ಈಟಿವಿ ಭಾರತ್ ವಿಸೃತ್ತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು‌ ಮೊನ್ನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ‌ ನಡೆಸಿದ್ದರು. ಇದೀಗ ಬಳ್ಳಾರಿಯಿಂದ ಬೋನ್‌ ಹಾಗೂ ಬಲೆ ತರಿಸಲಾಗಿದ್ದು, ಮೊಸಳೆ ಸೆರೆಗೆ ಮುಂದಾಗಿದ್ದಾರೆ.

ABOUT THE AUTHOR

...view details