ವಾನರಸೇನೆ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ - ವರದಾ ನದಿ
ಹಾವೇರಿ: ಹಂದಿಗನೂರು ಗ್ರಾಮದಲ್ಲಿ ವರದಾ ನದಿಯಲ್ಲಿ ಸಿಲುಕಿದ್ದ ವಾನರಸೇನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಏಕಾಏಕಿ ನದಿ ನೀರು ಹೆಚ್ಚಳವಾಗಿದ್ದರಿಂದ ಕೋತಿಗಳು ನದಿ ದಾಟಲಾಗದೇ ಮಾವಿನಮರದಲ್ಲೇ ಕುಳಿತಿದ್ದವು. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ತೆರಳಿ ಮರದಿಂದ ದಡದವರೆಗೆ ಏಣಿ ಕಟ್ಟಿ, ಬಾಳೆ ಹಣ್ಣು ಇಟ್ಟು ಬಂದಿದ್ದಾರೆ.