ನೆರೆಯ ಬರೆ: ರೈತರ ಬಾಳಿಗೆ ಕಹಿಯಾಯ್ತು ಕಬ್ಬು...ನರಕಯಾತನೆಯಲ್ಲಿ ಅನ್ನದಾತ - ಉತ್ತರ ಕರ್ನಾಟಕದ ನೆರೆ ಗೋಳು
ಬೇಸಿಗೆಯಲ್ಲಿ ಬಿಸಿಲ ಬೇಗೆಗೆ ಒಣಗಿದ್ದ ಕಬ್ಬು, ಮಳೆಗಾಲದಲ್ಲಿ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ಚಿಕ್ಕೋಡಿಯ ಸುತ್ತಮುತ್ತಲ ಪ್ರದೇಶದಲ್ಲಿ ಶೇಕಡಾ 15 ರಷ್ಟು ಕಬ್ಬು ಬಿಸಿಲ ಜಳಕ್ಕೆ ನಾಶವಾದರೆ, ಶೇಕಡಾ 45 ರಷ್ಟು ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಇದರ ಪರಿಣಾಮ ಇಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.