ರಮೇಶ ಜಾರಕಿಹೊಳಿ ಅಭಿಮಾನಿಯಿಂದ ಪಾದಯಾತ್ರೆ.. - ಚಿಕ್ಕೋಡಿ ಜಾರಕಿಹೊಳಿ ಅಭಿಮಾನಿಯ ಪಾದಯಾತ್ರೆ ಸುದ್ದಿ
ಚಿಕ್ಕೋಡಿ:ರಮೇಶ ಜಾರಕಿಹೋಳಿ ಗೆದ್ದರೆ, ಗೋಕಾಕ್‌ನ ಲಕ್ಷ್ಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುವುದಾಗಿ ಅಯ್ಯಪ್ಪನ ಭಕ್ತ ಭೀಮಪ್ಪ (ರಾಜು) ಶಿವಲಿಂಗ ಕಿಚಡೆ ಎಂಬುವರು ಹರಕೆ ಹೊತ್ತಿದ್ದರು. ಬೆಳಗಾವಿ ಜಿಲ್ಲೆಯ ರಾಯಬಾಗದಿಂದ ಪಾದಯಾತ್ರೆ ಆರಂಭಿಸಿ ಮಾವಿನಹೊಂಡ, ಭೆಂಡವಾಡ, ದಂಡಾಪುರ, ದುರದುಂಡಿ, ಅರಭಾವಿ, ಲೋಳಸೂರ ಮಾರ್ಗವಾಗಿ ಗೋಕಾಕ್ ಲಕ್ಷ್ಮಿ ದೇವಸ್ಥಾನ ತನಕ ಪಾದಯಾತ್ರೆ ಮಾಡಿ ಹರಕೆ ತೀರಿಸಿದ್ದಾರೆ. ಜಿದ್ದಾಜಿದ್ದಿನ ಕಣದಲ್ಲಿ ರಮೇಶ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರ ಅಭಿಮಾನಿ ಶಿವಲಿಂಗ ಕಿಚಡೆ ಪಾದಯಾತ್ರೆ ನಡೆಸುವ ಮೂಲಕ ಹರಕೆ ತೀರಿಸಿದ್ದಾರೆ.
TAGGED:
foot rally news chikkodi