ಹಾವೇರಿ: ಕೊರೊನಾ ವಾರಿಯರ್ಸ್‌ಗೆ ದಿನಬಳಕೆ ವಸ್ತುಗಳ ಕಿಟ್ ವಿತರಣೆ - corona warriors
ಹಾವೇರಿ: ನಗರದ ಕೊರೊನಾ ವಾರಿಯರ್ಸ್‌ಗೆ ಹಾವೇರಿ ಶಾಸಕ ನೆಹರೂ ಓಲೇಕಾರ್ ಕಿಟ್ ವಿತರಿಸಿದರು. ನಗರದ ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರದ ಕಿಟ್ ವಿತರಿಸಲಾಯಿತು. ವಾಲ್‌ಮನ್‌ಗಳು ಹಾಗೂ ಪೌರಕಾರ್ಮಿಕರಿಗೆ ದಿನನಿತ್ಯ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಅಕ್ಕಿ, ಎಣ್ಣೆ ಸೇರಿದಂತೆ ವಿವಿಧ ದಿನೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.