ಗ್ರಹಣ ಕಾಲದಲ್ಲಿ ಆಹಾರ ಸೇವನೆ: ಟೌನ್‌ಹಾಲ್ ಬಳಿಯಿಂದ ಪ್ರತ್ಯಕ್ಷ ವರದಿ - food consumption during solar eclipse
ಬೆಳಕು ಕತ್ತಲಿನಾಟದ ಕಂಕಣ ಸೂರ್ಯಗ್ರಹಣ ಸಮಯದಲ್ಲಿ ಬೆಂಗಳೂರು ಟೌನ್‌ಹಾಲ್ ಬಳಿ ಮೂಢನಂಬಿಕೆ ವಿರೋಧಿ ಒಕ್ಕೂಟ ಕಾರ್ಯಕ್ರಮ ಆಯೋಜಿಸಿದೆ. ವಿಜ್ಞಾನದೆಡೆಗೆ ನಮ್ಮ ನಡೆ, ತೊಲಗಲಿ ತೊಲಗಲಿ ಮೂಢನಂಬಿಕೆ ತೊಲಗಲಿ, ಮೂಢನಂಬಿಕೆಯನ್ನ ನಂಬಿ ಪೇಚಾಟಕ್ಕೆ ಸಿಲುಕದಿರಿ, ವಿಜ್ಞಾನವು ಚಿಂತನೆಯ ಮಾರ್ಗ ಆದರೆ ಮೂಢನಂಬಿಕೆಯು ಜೀವಕ್ಕೆ ಅಪಾಯದ ಮಾರ್ಗ, ಕಪಟ ಜ್ಯೋತಿಷಿಗಳನ್ನು ನಂಬಬೇಡಿ, ಮೌಢ್ಯತೆ ಅಳಿಯಲಿ ವಿಜ್ಞಾನ ಬೆಳಗಲಿ ಎಂಬ ಧ್ಯೇಯದ ಮೂಲಕ ಹಣ್ಣು ಹಂಪಲು, ಬಿಸಿ ಬೇಳೆ ಬಾತ್, ಕಾಯಿ ಒಬ್ಬಟ್ಟು, ಇಡ್ಲಿ ವಡೆ, ಸಿಹಿ ತಿಂಡಿ ಇಟ್ಟು ಎಲ್ಲರೂ ಟೌನ್‌ಹಾಲ್ ಬಳಿ ಸೇರಿದ್ದಾರೆ. ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.