ಮುದನೂರ ಗ್ರಾಮದಲ್ಲಿ "ಜಾನಪದ ಜಾತ್ರೆ":ವಿಡಿಯೋ.. - Folk Festival at Mudanura Village in Surapura
🎬 Watch Now: Feature Video
ಯಾದಗಿರಿ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುರಪುರ ತಾಲೂಕು ಮುದನೂರ ಕೆ ಗ್ರಾಮದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಸುರಪುರ ಶಾಸಕ ರಾಜುಗೌಡ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಜಾನಪದ ಕಲಾವಿದರು ಭಾಗವಹಿಸಿದ್ದರು. ಡೊಳ್ಳು ಕುಣಿತ, ತಲೆ ಮೇಲೆ ಮಡಿಕೆ, ದೀಪ ಇಟ್ಟುಕೊಂಡು ನೃತ್ಯ ಮಾಡುವುದು, ಏಣಿ ಮೇಲೆ ಸಾಹಸ ಕುಣಿತ ಹೀಗೆ ಹಳ್ಳಿ ಸೊಬಗಿನ ವಿವಿಧ ಜಾನಪದ ಕಲಾಪ್ರಕಾರಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಕಂಠಿ ಮಠದ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.