ಕರ್ಫ್ಯೂ ಜಾರಿ... ಗ್ರಾಹಕರಿಲ್ಲವೆಂದು ಹೂ ವ್ಯಾಪಾರಿಗಳ ಗೋಳು - ಬೆಂಗಳೂರು ಕರ್ಫ್ಯೂ ಲೇಟೆಸ್ಟ್ ನ್ಯೂಸ್
ಬೆಂಗಳೂರು: ಇಂದು ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ತಬ್ಧಗೊಂಡಿವೆ. ಆದರೆ ನಗರದಲ್ಲಿ ಬೆಳಗ್ಗೆಯಿಂದ ಹೂವಿನ ವ್ಯಾಪಾರಸ್ಥರು ಯಾವುದೇ ವ್ಯಾಪಾರವಿಲ್ಲದೆ ಕುಳಿತಿದ್ದಾರೆ. ಕರ್ಫ್ಯೂನಿಂದಾಗಿ ಯಾರು ಕೂಡ ಮಾರುಕಟ್ಟೆಗೆ ಬರುತ್ತಿಲ್ಲ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಹೂ ಮಾರಾಟಗಾರರು ಈಟಿವಿ ಭಾರತದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.