ಕರ್ನಾಟಕ

karnataka

ETV Bharat / videos

ಆಯುಧ ಪೂಜೆಗೆ ಹೂವು, ಹಣ್ಣುಗಳ ದರದಲ್ಲಿ ಏರಿಕೆ... ಬೂದು ಕುಂಬಳಕಾಯಿಗೆ ಭಾರೀ ಬೇಡಿಕೆ! - ಪೂಜೆ ಸಲ್ಲಿಸುವುದು ವಾಡಿಕೆ

By

Published : Oct 6, 2019, 6:12 PM IST

ತುಮಕೂರು: ವಿಜಯದಶಮಿ ಹಬ್ಬದ ಹಿನ್ನೆಲೆ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು. ಆಯುಧ ಪೂಜೆ ದಿನ ಎಲ್ಲರೂ ತಮ್ಮ ಮಳಿಗೆ, ವಾಹನ, ಯಂತ್ರಗಳನ್ನು ಸಿಂಗರಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಈ ನಿಟ್ಟಿನಲ್ಲಿ ಜನರು ಬಿಸಿಲನ್ನೂ ಲೆಕ್ಕಿಸದೆ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಬೂದು ಕುಂಬಳಕಾಯಿ ಕೆಜಿಗೆ ₹ 10, ಸೇಬು ₹ 60-80, ಮೂಸಂಬಿ ₹ 80, ದಾಳಿಂಬೆ ₹ 130, ₹ ದ್ರಾಕ್ಷಿ 150. ಹೂಗಳಲ್ಲಿ ಕೆಜಿಗೆ ಮಾರಿಗೋಲ್ಡ್ ₹ 250, ಕಾಕಡ ₹ 600, ಸುಗಂಧರಾಜ ₹ 400. ಹಾರಗಳು ಅದರ ಗಾತ್ರಕ್ಕೆ ತಕ್ಕಂತೆ ₹ 250-2,000ವರೆಗೆ ಇವೆ.

ABOUT THE AUTHOR

...view details