ಜೀವದಂತೆ ಪ್ರೀತಿಸಿದ ಜಾನುವಾರುಗಳಿಗೆ ಈಗ ಮೇವಿಲ್ಲ... ಮಾರಲು ಮುಂದಾದ ಸಂತ್ರಸ್ತರು! - ದನಗಳನ್ನು ಮಾರಲು ಮುಂದಾದ ಸಂತ್ರಸ್ತರು
ಕೃಷ್ಣೆ ಪ್ರವಾಹದಲ್ಲಿ ಸಿಲುಕಿ ಬದುಕು ಕಳೆದುಕೊಂಡ ನಿರಾಶ್ರಿತರ ಬದುಕೀಗ ಅಕ್ಷರಶಃ ನರಕದಂತಾಗಿದೆ. ಎಂದೂ ಕಂಡರಿಯದ ಭೀಕರ ಪ್ರವಾಹದಲ್ಲಿ ಮನೆ, ಬೆಳೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ತಾವು ಸಾಕಿದ ದನಕರುಗಳಿಗೆ ಹಾಕಲು ಮೇವಿಲ್ಲದೇ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.