ಸಂತ್ರಸ್ತರಿಗೆ ಸಿಗುತ್ತಿಲ್ಲ ಬಾಡಿಗೆ ಮನೆ... ಬಿದ್ದ ಜಾಗದಲ್ಲೇ ಸೂರು ಕಟ್ಟಿಕೊಳ್ಳುತ್ತಿರುವ ಜನ - ಪ್ರವಾಹ ಸಂತ್ರಸ್ತರು
ಉತ್ತರ ಕರ್ನಾಟಕವನ್ನು ಅಲ್ಲೋಲಕಲ್ಲೋಲವಾಗಿಸಿದ ಭಾರಿ ಪ್ರವಾಹದಲ್ಲಿ ಸೂರು ಕಳೆದುಕೊಂಡ ಸಂತ್ರಸ್ತರು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ. ತಮಗೆ ಅಂತ ಸ್ವಂತ ಸೂರು ಕಟ್ಟಿಕೊಳ್ಳಲು ಜಾಗವಿಲ್ಲ. ಬೇರೆ ಮನೆಯಲ್ಲಿ ವಾಸಿಸೋಣವೆಂದರೆ ಕೈಯಲ್ಲಿ ದುಡ್ಡಿಲ್ಲ. ಇಂತಹ ಸ್ಥಿತಿ ನಮಗೇಕೆ ಎಂದು ಯೋಚಿಸುತ್ತಿದ್ದಾರೆ. ಇವರ ಬದುಕೀಗ ಮಳೆ ಹನಿ ನಿಂತರೂ, ಮರದ ಹನಿ ನಿಲ್ಲಲಿಲ್ಲ ಎಂಬಂತಾಗಿದೆ.