ಕರ್ನಾಟಕ

karnataka

ETV Bharat / videos

ಪ್ರವಾಹ ಭೀತಿ: ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ನದಿ ಪಾತ್ರದ ಜನ - Flood situation latest news

By

Published : Aug 17, 2020, 9:01 PM IST

ಚಿಕ್ಕೋಡಿ: ಮಹಾಮಳೆಯಿಂದ ಹಾಗೂ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿರುವುದರಿಂದ ದೂಧಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿ ಭರ್ತಿಯಾಗಿವೆ. ಅಪಾರ ಪ್ರಮಾಣದ ನೀರು ಬಿಡುಗಡೆಯಿಂದ ಪ್ರವಾಹ ಭೀತಿ ಸಹ ಹೆಚ್ಚಾಗಿದೆ. ಕಳೆದೆರಡು ದಿನಗಳಿಂದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿದ್ದು ನಾಳೆಗೆ ಕರ್ನಾಟಕ ರಾಜ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ಇಂಗಳಿ ಗ್ರಾಮದ ನದಿ ತೀರದ ಜನರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ.

ABOUT THE AUTHOR

...view details