ಕರ್ನಾಟಕ

karnataka

ETV Bharat / videos

ಮುಳುಗಡೆಯಾದ್ವು ನದಿಯಂಚಿನ ಗ್ರಾಮಗಳು... ಜನರ ರಕ್ಷಣೆಗೆ ಹರಸಾಹಸ - ಸುಮಾರು ೪೦೦ ಕ್ಕೂ ಹೆಚ್ಚು ಮನೆಗಳು ಮುಳುಗಡೆ

By

Published : Aug 8, 2019, 5:04 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ಮಳೆಗೆ ಹಲವು ಗ್ರಾಮಗಳೇ ಮುಳುಗಡೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಕಾರವಾರದ ಕಿನ್ನರ ಗ್ರಾಮದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ನೀರಿನಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಪೊಲೀಸರು, ಸ್ಥಳೀಯರು ಧಾವಿಸಿದ್ದು, ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನೀರಿನ ಮಧ್ಯ ಸಿಲಿಕಿರುವ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಊಟ ನಿದ್ರೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

...view details