ಪ್ರವಾಹಕ್ಕೆ ಕೊಚ್ಚಿ ಹೋಯ್ತು ಮಗ್ಗದ ಬಾಳು... ಬಣ್ಣ ಮಾಸಿತು ನೇಕಾರರ ಬದುಕು
ನೇಕಾರರ ಬದುಕು ಇದ್ದಾಗಲೂ ಕುಣಿಯಲ್ಲಿಯೇ, ಸತ್ತ ಮೇಲೂ ಕುಣಿಯಲ್ಲೇ ಎಂಬ ಗಾದೆ ಮಾತು ಅಕ್ಷರಶ: ಸತ್ಯವಾಗಿದೆ. ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಯ ಪ್ರವಾಹದಿಂದ ನೂರಾರು ನೇಕಾರ ಕುಟುಂಬಗಳು ಬೀದಿಗೆ ಬಂದಿವೆ. ಮನೆಯೇ ಜಲಾವೃತಗೊಂಡ ಪರಿಣಾಮ, ನೇಕಾರಿಕೆಗೆ ಕಚ್ಚಾವಸ್ತುಗಳು ಸಿಗದೇ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಜೀವನವೇ ಶೂನ್ಯವಾಗಿದೆ. ಮಳೆ ನೀರು ಬಾಗಲಕೋಟೆಯ ನೇಕಾರರ ಬದುಕು ಕಸಿದುಕೊಂಡ ಸ್ಟೋರಿ ಇದು.