ಹಿಂಡಲಗಾ ಜೈಲಿಗೂ ಪ್ರವಾಹ: ಕೈದಿಗಳ ಪರದಾಟ - ಹಿಂಡಲಗಾ ಕೇಂದ್ರ ಕಾರಾಗೃಹ
ಬೆಳಗಾವಿ ಜಿಲ್ಲೆಯಲ್ಲಿ ಎಡಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದ ಹೊರ ವಲಯದಲ್ಲಿರುವ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ನೀರು ನುಗ್ಗಿದೆ. 700ಕ್ಕೂ ಅಧಿಕ ಕೈದಿಗಳು ಇಲ್ಲಿದ್ದು, ರಾತ್ರಿಯಿಡೀ ಅವರೆಲ್ಲಾ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪಂಪ್ ಮಾಡಿ ನೀರನ್ನು ಹೊರತೆಗೆಯಲಾಗುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.