ನೆರೆ ಬಂದು ಎರಡು ತಿಂಗಳಾದ್ರೂ ಸಂತ್ರಸ್ತರಿಗಿಲ್ಲ ಸೂರು: ನೆರೆ ಪೀಡಿತ ಶೆಡ್ ನಿವಾಸಿಗಳ ಜೀವನ ನರಕ! - ಗೋಕಾಕ್ ಅರಣ್ಯ ಇಲಾಖೆಯ ಭೂಮಿ
ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣಕೇಶಿ ನದಿ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ತತ್ತರಿಸಿ ಹೋಗಿದೆ. ಇಲ್ಲಿನ ನೂರಾರು ಜನ ಮನೆ ಕಳೆದುಕೊಂಡು ಇಂದಿಗೂ ನಿರಾಶ್ರಿತರ ಕೇಂದ್ರದಲ್ಲಿ ಬದುಕು ನಡೆಸುತ್ತಿದ್ದಾರೆ. ಇವರಿಗಾಗಿ ನಿರ್ಮಾಣವಾಗುತ್ತಿರೋ ಶೆಡ್ ಕೂಡ ಅಷ್ಟೇನೂ ಅನುಕೂಲವಾಗಿಲ್ಲ. ಗೋಕಾಕ್ ಅರಣ್ಯ ಇಲಾಖೆಯ ಭೂಮಿಯಲ್ಲಿ ತಗಡಿನ ಶೆಡ್‍ಗಳನ್ನು ಬಿಟ್ಟರೆ ಬೇರೆ ಯಾವ ನಾಗರಿಕ ಸೌಲಭ್ಯಗಳು ಒದಗಿಸದೇ ಇರುವುದರಿಂದ ನಿರಾಶ್ರಿತರ ಜೀವನ ನರಕ ಸದೃಶ್ಯವಾಗಿದೆ.