ರಾಜ್ಯ ಸರ್ಕಾರದ ರಿಲೀಫ್ ಪ್ಯಾಕೇಜ್ ಸ್ವಾಗತಾರ್ಹ : ಎಫ್ಕೆಸಿಸಿಐ ಅಧ್ಯಕ್ಷ - ಕೋವಿಡ್-19 ರಿಲೀಫ್ ಪ್ಯಾಕೇಜ್
ಬೆಂಗಳೂರು : ಲಾಕ್ಡೌನ್ ಅವಧಿಯಲ್ಲಿ ಎಂಎಸ್ಎಂಇ ವಲಯಕ್ಕೆ ಪರಿಹಾರ ನೀಡಲು, ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಸರ್ಕಾರವು ನಮ್ಮ ಮನವಿ ಸ್ವೀಕರಿಸಿ, ವಿದ್ಯುತ್ ಬಿಲ್ಗಳ ನಿಗದಿತ ಶುಲ್ಕದ ಮನ್ನಾ, ಸಮಯೋಚಿತ ಪಾವತಿಗೆ ಶೇಕಡಾ ಒಂದರಷ್ಟು ರಿಯಾಯಿತಿ, 2020ರ ಜೂನ್ 30ರವರೆಗೆ ವಿದ್ಯುತ್ ಸಂಪರ್ಕ ಕಡಿತದಿಂದ ವಿನಾಯಿತಿ ನೀಡಿದೆ. ಇಷ್ಟೇ ಅಲ್ಲ ವಿಳಂಬದ ಪಾವತಿಗೆ ಶೇಕಡಾ 50 ರಿಂದ 70ರ ವರೆಗೆ ದಂಡದ ಬಡ್ಡಿಯಿಂದ ರಿಯಾಯಿತಿ ಘೋಷಿಸಿರುತ್ತದೆ ಇದನ್ನು ನಾವು ಸ್ವಾಗತಿಸುತೇವೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ್ ತಿಳಿಸಿದ್ದಾರೆ.