25ಕ್ಕೂ ಹೆಚ್ಚು ಬೇಡಿಕೆಗಳನ್ನು ಸಿಎಂ ಮುಂದಿಟ್ಟ ಎಫ್ಕೆಸಿಸಿಐ ನಿಯೋಗ.. - ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿದ ಎಫ್ಕೆಸಿಸಿಐ ನಿಯೋಗ
ಬೆಂಗಳೂರು:ರಾಜ್ಯ ಸರ್ಕಾರದ ಆಯವ್ಯಯ ಮಾರ್ಚ್ 5ನೇ ತಾರೀಖು ಮಂಡನೆಯಾಗಲಿದೆ. ಇಂದು ಎಫ್ಕೆಸಿಸಿಐ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ 25ಕ್ಕೂ ಕೈಗಾರಿಕಾ ವಲಯದ ಪರ ಬೇಡಿಕೆಗಳನ್ನು ಮುಂದಿಟ್ಟಿತು. ಎಲೆಕ್ಟ್ರಾನಿಕ್ ಸಿಟಿ ರೀತಿ ಟೌನ್‌ಶಿಪ್ ಪ್ರಾಜೆಕ್ಟ್, ಹೊಸದಾಗಿ ಕೈಗಾರಿಕೆ ಪ್ರಾರಂಭದ ಸಂದರ್ಭದಲ್ಲಿ 3 ವರ್ಷಗಳ ಕಾಲ ಆಸ್ತಿ ತೆರಿಗೆ ವಿನಾಯಿತಿ ಸೇರಿ 25ಕ್ಕೂ ಹೆಚ್ಚು ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಯಿತು. ಇದಕ್ಕೆ ಸಿಎಂ ಸಂಬಂಧಿಸಿದ ಸಚಿವರೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಸಿ ಆರ್ ಜನಾರ್ದನ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
TAGGED:
ಎಫ್ಕೆಸಿಸಿಐ ನಿಯೋಗ ಬೇಡಿಕೆಗಳು