ಕಬಿನಿ ಹಿನ್ನೀರಿನಲ್ಲಿ ಒಂದೇ ಕಡೆ ಐದು ಹುಲಿ ದರ್ಶನ : ಸಂತಸಗೊಂಡ ಪ್ರವಾಸಿಗರು - tigers found in the Nagarahole National Park
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಚಳಿ ವಾತಾವರಣದಲ್ಲಿ ಐದು ಹುಲಿಗಳು ಕಾಣಿಸಿವೆ. ಸಾಮಾನ್ಯವಾಗಿ ಚಳಿಯ ವಾತಾವರಣದಲ್ಲಿ ನೀರಿನ ಕಡೆ ಹೋಗಲು ಹುಲಿಗಳು ಹಿಂಜರಿಯುತ್ತವೆ. ಆದರೆ, ಇಂತಹ ವಾತಾವರಣದಲ್ಲಿಯೂ ಒಂದೇ ಕಡೆ ಹುಲಿಗಳು ಹೋಗುತ್ತಿರುವ ದೃಶ್ಯ ನೋಡಿದ ಸಫಾರಿಗರು ಸಂತಸಪಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ, ಪ್ರವಾಸಿಗರು ಇದರತ್ತ ಆಕರ್ಷಿತರಾಗುತ್ತಿದ್ದಾರೆ.