ಮಂಗಳೂರು ಬೋಟ್ ದುರಂತ.. ಪ್ರಾಣಾಪಾಯದಿಂದ ಪಾರಾದ ಮೀನುಗಾರ ಹೇಳಿದ್ದೇನು ಗೊತ್ತಾ..? - ಅರಬ್ಬೀ ಸಮುದ್ರದಲ್ಲಿ ಬೋಟ್ ದುರಂತ
ಮಂಗಳೂರು: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ನಡೆದ ಕೇರಳ ರಾಜ್ಯದ ಮೀನುಗಾರಿಕಾ ದೋಣಿ ದುರಂತದಲ್ಲಿ ರಕ್ಷಣೆಗೊಳಗಾದ ಮೀನುಗಾರ ಸುನಿಲ್ ದಾಸ್ ಅಂದು ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕೇರಳದ ಕೊಯಿಕ್ಕೋಡ್ನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್ಗೆ ಸೋಮವಾರ ರಾತ್ರಿ ಮಂಗಳೂರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿತ್ತು. ಮೀನುಗಾರಿಕಾ ಬೋಟ್ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ 14 ಮಂದಿ ಮೀನುಗಾರರಿದ್ದರು. ಬೋಟ್ಗೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಿತ್ತು.
Last Updated : Apr 14, 2021, 7:02 PM IST