ಪ್ರೀತಿಯ ಕೋತಿಗೆ ವರ್ಷದ ತಿಥಿ ಕಾರ್ಯ ಮಾಡಿದ ಶಾಸಕ ಸಾ.ರಾ. ಮಹೇಶ್ - Mysore favorite monkey
ಮೈಸೂರು: ನಗರದಲ್ಲಿ ಮೃತಪಟ್ಟ ಪ್ರೀತಿಯ ಕೋತಿಗೆ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯ ಮಾಡಲಾಗಿದೆ. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ತಮ್ಮ ನೆಚ್ಚಿನ ಕೋತಿ ಚಿಂಟುವಿನ ವರ್ಷದ ಪುಣ್ಯಸ್ಮರಣೆ ಕಾರ್ಯವನ್ನು ಶಾಸಕ ಸಾ.ರಾ. ಮಹೇಶ್ ಅವರು ಕುಟುಂಬಸ್ಥರೊಂದಿಗೆ ನೆರವೇರಿಸಿ ಅಚ್ಚರಿ ಮೂಡಿಸಿದರೂ ಅವರ ಮಾನವೀಯ ಕೆಲಸ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಸಾಕಿ ಬೆಳೆಸಿದ ಕೋತಿ ಕಳೆದ ವರ್ಷ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ವಿದೇಶಕ್ಕೆ ಹೋಗದೇ ವಾಪಸ್ ಬಂದ ಸಾ.ರಾ. ಮಹೇಶ್ ಅದರ ತಿಥಿ ಕಾರ್ಯ ನೆರವೇರಿಸಿದ್ದರು. ಇನ್ನು ಅದರ ನೆನಪಿಗಾಗಿ ತಮ್ಮ ಫಾರ್ಮ್ಹೌಸ್ನಲ್ಲಿ ಕುರಿ ಮೇಲೆ ಕೂತಿರುವ ವಾನರನ ವಿಗ್ರಹ ಪ್ರತಿಷ್ಠಾಪಿಸಿದ್ದು ಇಂದು ಅಲ್ಲಿ ಸುದರ್ಶನ ಹೋಮ, ಗಣಪತಿ ಹೋಮ ಮಾಡಿಸಲಾಯಿತು.