ಕೊರೊನಾ ಸಾಮಾನ್ಯ ಕಾಯಿಲೆ: ಸೋಂಕಿನಿಂದ ಗುಣಮುಖರಾದವರ ಮನದ ಮಾತು - ಯಾದಗಿರಿ
ಯಾದಗಿರಿ: ಇಡೀ ದೇಶದಲ್ಲಿ ಕೊರೊನಾ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದ್ದರೂ ಯಾದಗಿರಿ ಜಿಲ್ಲೆ ಮಾತ್ರ ಯಾವುದೇ ಕೊರೊನಾ ಪ್ರಕರಣವಿಲ್ಲದೇ ಉಳಿದುಕೊಂಡಿತ್ತು. ಈ ಸಂದರ್ಭದಲ್ಲಿ ಪ್ರಥಮವಾಗಿ ಕೊರೊನಾ ಕಾಣಿಸಿಕೊಂಡಿದ್ದು ಸುರಪುರ ನಗರದ ದಂಪತಿಯಲ್ಲಿ. ಯಾದಗಿರಿ ಜಿಲ್ಲೆಯಲ್ಲಿಯೇ ಪ್ರಥಮ ಕೋವಿಡ್ ಪ್ರಕರಣ ಕಾಣಿಸಿಕೊಂಡ ಸುರಪುರ ನಗರದ ಆಸರ ಮೊಹಲ್ಲಾದ ಬಾಬಾ ಶಹಾ ದಂಪತಿ ಯಾದಗಿರಿಯ ಕೋವಿಡ್ ಚಿಕಿತ್ಸಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸೋಂಕಿತ ದಂಪತಿ ಕೊರೊನಾದಿಂದ ಸಂಪೂರ್ಣ ಮುಕ್ತರಾಗಿದ್ದು, ಈ ಟಿವಿ ಭಾರತದೊಂದಿಗೆ ಕೊರೊನಾದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.