ಕರ್ನಾಟಕ

karnataka

ETV Bharat / videos

ಟು ಬ್ರದರ್ಸ್ ಸಾಮಿಲ್​​ಗೆ ಬೆಂಕಿ: 25 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ - ಚಿಕ್ಕಬಳ್ಳಾಪುರ ಶಾಮಿಲಿಗೆ ಬೆಂಕಿ

By

Published : Mar 20, 2020, 10:17 AM IST

ವಿದ್ಯುತ್​ ಶಾರ್ಟ್ ಸರ್ಕೂಟ್ ನಿಂದ ಸಾಮಿಲ್​​​ಗೆ ಬೆಂಕಿ ಬಿದ್ದು 25 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು‌ ಭಸ್ಮವಾದ ಘಟನೆ ಜಿಲ್ಲೆಯ‌ ಗೌರಿಬಿದನೂರು ನಗರದ ಹೊರವಲಯದ ಕಲ್ಲಂತರಾಯಗುಟ್ಟೆ ಬಳಿ ‌ನಡೆದಿದೆ. ನಗರದ ಹೊರವಲಯದ ಕಲ್ಲಂತರಾಯನ ಗುಟ್ಟೆ ಬಳಿ ಇರುವ ಟು ಬ್ರದರ್ಸ್ ಸಾಮಿಲ್​​ಗೆ(ವುಡ್ ವರ್ಕ್ಸ್) ಶಾರ್ಟ್​ ಸರ್ಕ್ಯೂಟ್​​​​ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಅರ್ಧದಷ್ಟು ಸಾಮಿಲ್​ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ನಂದಿಸಿದೆ. ಸ್ಥಳಕ್ಕೆ ಸಿಪಿಐ ರವಿಕುಮಾರ್ ಹಾಗೂ ಪಿಎಸ್ಐ ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details