ನಿವರಗಿ ಗ್ರಾಮದಲ್ಲಿ ಶೆಡ್ಗೆ ಬೆಂಕಿ: ಲಕ್ಷಾಂತರ ರೂ. ಹಾನಿ - fire news
ವಿಜಯಪುರ: ಆಕಸ್ಮಿಕವಾಗಿ ಬೆಂಕಿ ತಗುಲಿ ಪತ್ರಾಸ್ ಶೆಡ್ವೊಂದು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ನಿವರಗಿ ಗ್ರಾಮದಲ್ಲಿ ನಡೆದಿದೆ. ಅಶೋಕ ನಾಗಪ್ಪ ಕಾರಾಜನಗಿ ಎಂಬುವರ ಪತ್ರಾಸ್ ಶೆಡ್ಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾಗಿದೆ. ಹೊಲದಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಹೊತ್ತಿಕೊಂಡ ಬೆಂಕಿಯಿಂದ ದವಸ-ಧಾನ್ಯ, ಬಟ್ಟೆ-ಬರೆ ಕಾಗದ-ಪತ್ರ, ಗೃಹಬಳಕೆ ವಸ್ತುಗಳು ಸೇರಿದಂತೆ ಲಕ್ಷಾಂತರ ರೂ.ಹಾನಿಯಾಗಿದೆ.