ಮತ್ತೆ ಕಪ್ಪತ್ತಗುಡ್ಡಕ್ಕೆ ಬಿದ್ದ ಬೆಂಕಿ: ಅಪಾರ ಸಸ್ಯ ಸಂಪತ್ತು ನಾಶ - ಗದಗ ಕಪ್ಪತ್ತ ಗುಡ್ಡ
ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಲೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ಅಗ್ನಿಗೆ ಆಹುತಿಯಾಗಿದೆ. ಶಿರಹಟ್ಟಿ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಗೆ ಬರುವ ಕಪ್ಪತಗುಡ್ಡ ಗೋಲಗೇರಿ ಮಠದ ಸಮೀಪವಿರುವ ಔಷಧಿ ಸಸ್ಯ ಪಾಲನಾ ಘಟಕದ (ದೇವಿ ವನ) ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಸುಮಾರು 40-50 ಎಕರೆ ಸಸ್ಯ ಸಂಪತ್ತು ಸುಟ್ಟು ಹೊಗಿದೆ. ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಆವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.