ಕಿಡಿಗೇಡಿಗಳು ಇಟ್ಟ ಬೆಂಕಿಗೆ 20 ಎಕರೆಯಲ್ಲಿ ಬೆಳೆದಿದ್ದ ಕಡಲೆ ಬೆಳೆಯ ಬಣವೆ ಸಂಪೂರ್ಣ ಭಸ್ಮ - ಕಲಬುರಗಿ ಸುದ್ದಿ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊಸ್ಸುರಿನಲ್ಲಿ ಕಿಡಿಗೇಡಿಗಳು ಕಡಲೆ ಬಣವೆಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. 20 ಎಕರೆಯಲ್ಲಿ ಬೆಳೆದ ಕಡಲೆ ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹೊಸ್ಸುರು ಗ್ರಾಮದ ಭೀಮಣ್ಣ ಸೀಭಾ ಎಂಬ ರೈತನಿಗೆ ಸೇರಿದ ಬೆಳೆ ಇದಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಕಡಲೆ ಬೆಳೆ ಕಟಾವು ಮಾಡಿ ಶೇಖರಿಸಿಡಲಾಗಿತ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 9, 2021, 10:02 AM IST