ಭತ್ತದ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಬೆಂಕಿ: ಹುಲ್ಲಿನ ಜೊತೆ ಟ್ರ್ಯಾಕ್ಟರ್ ಬೆಂಕಿಗಾಹುತಿ - ಭತ್ತದ ಹುಲ್ಲು ಬೆಂಕಿಗಾಹುತಿ
ಜಿಲ್ಲೆಯ ಮಾನ್ವಿ ತಾಲೂಕಿನ ಚಿಕಲಪರ್ವಿ ಗ್ರಾಮದ ಬಳಿ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಚನ್ನಬಸವ ಹೂಗಾರ್ ಎನ್ನುವ ರೈತನಿಗೆ ಸೇರಿದ ಟ್ರಾಕ್ಟರ್ ಇದಾಗಿದ್ದು, ತಮ್ಮ ಹೊಲದಲ್ಲಿದ್ದ ಹುಲ್ಲನ್ನು ತರುವ ವೇಳೆ ಬೆಂಕಿ ಅವಘಡ ಸಂಭವಿಸಿದೆ. ರೈತ ಚೆನ್ನಬಸವನಿಗೆ ಆಧಾರವಾಗಿದ್ದ ಟ್ರ್ಯಾಕ್ಟರ್ ಬೆಂಕಿಗಾಹುತಿ ಆಗಿರುವುದು ನುಗ್ಗಲಾರದ ತುತ್ತಾಗಿ ಪರಿಣಾಮಿಸಿದ್ದು, ಸರ್ಕಾರ ನಷ್ಟದ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾನೆ.