ಕರ್ನಾಟಕ

karnataka

ETV Bharat / videos

ಚಳ್ಳಕೆರೆ ತರಕಾರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ - ತರಕಾರಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ

By

Published : Jan 28, 2021, 10:37 AM IST

ಚಿತ್ರದುರ್ಗ: ತರಕಾರಿ ಮಾರುಕಟ್ಟೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನಾಲ್ಕು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದ ಘಟನೆ ಚಳ್ಳಕೆರೆ ಪಟ್ಟಣದಲ್ಲಿ ನಡೆಸಿದೆ. ತಡರಾತ್ರಿ ತರಕಾರಿ ಮಾರುಕಟ್ಟೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ಕು ತರಕಾರಿ ಅಂಗಡಿಳಿಂದ ಅಂದಾಜು 2 ಲಕ್ಷ ಮೌಲ್ಯದ ತರಕಾರಿ ಹಾಗೂ ಇತರೆ ವಸ್ತುಗಳು ಬೆಂಕಿಯಿಂದ ಹಾಳಾಗಿವೆ ಎನ್ನಲಾಗುತ್ತಿದೆ. ವಿನೋದ, ಶ್ವೇತ, ಗೌರಮ್ಮ ಹಾಗೂ ಯಶೋದಮ್ಮ ಎಂಬುವರಿಗೆ ಸೇರಿದ ತರಕಾರಿ ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಈ ಚಳ್ಳಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details