ಬಸವಕಲ್ಯಾಣದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಹೋಟೆಲ್ ಮತ್ತು ಟಯರ್ ಅಂಗಡಿ
ಬಸವಕಲ್ಯಾಣ: ಬೆಂಕಿ ತಗುಲಿದ ಪರಿಣಾಮ ಹೋಟೆಲ್ ಹಾಗೂ ಟಯರ್ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಇಲ್ಲಿನ ರಾಜಬಾಗ್ ಸವಾರ್ ದರ್ಗಾದ ಸಮೀಪ ನಡೆದಿದೆ. ಗೌಸೋದ್ದಿನ್ ಕಬಾಡಿ ಎನ್ನುವರಿಗೆ ಸೇರಿದ ಹೋಟೆಲ್ ಮತ್ತು ವಿಶಾಲ್ ಎನ್ನುವರಿಗೆ ಸೇರಿದ ಟಯರ್ ಅಂಗಡಿಗೆ ರಾತ್ರಿ 11ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದಿದೆ. ಲಕ್ಷಾಂತರ ರೂ. ನಷ್ಟವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ನಗರ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.