ಕರ್ನಾಟಕ

karnataka

ETV Bharat / videos

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಸ್‌ ಸಂಪೂರ್ಣ ಭಸ್ಮ - ramnagar latest crime news

By

Published : Dec 13, 2019, 1:48 PM IST

ಪ್ರವಾಸಿಗರನ್ನು ಕರೆತಂದಿದ್ದ ಬಸ್​​ನಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿದ್ದು ಸಂಪೂರ್ಣ ಭಸ್ಮವಾದ ಘಟನೆ‌ ರಾಮನಗರ ಜಿಲ್ಲೆ ಪಾದರಹಳ್ಳಿ ಬಳಿಯಿರುವ ರೆಸಾರ್ಟ್ ಬಳಿ ನಡೆದಿದೆ. ಬೆಂಗಳೂರಿನಿಂದ 30ಕ್ಕೂ ಹೆಚ್ಚು ಮಂದಿ ಪ್ರವಾಸಿಗರನ್ನು ತುಂಬಿಕೊಂಡು ಬಂದು ಕೆಳಗಿಳಿಸಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವೇಳೆ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಗ್ನಿಯ ಜ್ವಾಲೆಗೆ ಸಿಲುಕಿದ ಬಸ್ ಕ್ಷಣಾರ್ದಲ್ಲಿಯೇ ಸುಟ್ಟು ಕರಕಲಾಗಿದೆ.ಅಗ್ನಿಶಾಮಕ ದಳ ಬೆಂಕಿನಂದಿಸುವ ಕಾರ್ಯ ನಡೆಸಿದೆ. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details