ಬೆಂಗಳೂರಲ್ಲಿ ಅಗ್ನಿ ಅವಘಡ: ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ಗೆ ಬೆಂಕಿ - ಶ್ರೀ ಗುರು ಕೊಟ್ಟೂರೇಶ್ವರ್ ಹೋಟೆಲ್ ಗೆ ಬೆಂಕಿ
ಬೆಂಗಳೂರು: ಜಿಟಿಜಿಟಿ ಮಳೆ ನಡುವೆಯೂ ಬಸವನಗುಡಿಯ ಬಳಿಯ ನಟ್ಕಲ್ಲಪ್ಪ ವೃತ್ತದಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಹಾಗೂ ಆಪ್ಟಿಕಲ್ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವಾ ಅನಿಲ ಸೋರಿಕೆಯಿಂದ ಘಟನೆ ಸಂಭವಿಸಿರುವ ಶಂಕೆಯಿದೆ. ಸ್ಥಳಕ್ಕೆ ಬಸವನಗುಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.