ಚಾಮರಾಜನಗರದಲ್ಲಿ ರೆಸ್ಟೋರೆಂಟ್ ಧಗಧಗ.. ಅಗ್ನಿ ಅನಾಹುತದಿಂದ ಗ್ರಾಹಕರು ಪಾರು - ಗಾರ್ಡನ್ ಟೆನಿಸ್ ಕ್ಲಬ್ ರೆಸ್ಟೋರೆಂಟ್
ಚಾಮರಾಜನಗರ: ಸೋಮವಾರಪೇಟೆ ರಸ್ತೆಯಲ್ಲಿರುವ ಗಾರ್ಡನ್ ಟೆನ್ನಿಸ್ ಕ್ಲಬ್ ರೆಸ್ಟೋರೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಹೋಟೆಲ್ ಧಗಧಗ ಹೊತ್ತಿ ಉರಿದಿದೆ. ಹಾಡಹಗಲೇ ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು ಕ್ಲಬ್ನ ಎಲ್ಲಾ ಕೊಠಡಿಗಳಿಗೂ ಅಗ್ನಿ ವ್ಯಾಪಿಸಿ ಪೀಠೋಪಕರಣಗಳು ಹೊತ್ತಿ ಉರಿದಿವೆ. ಇದೇ ವೇಳೆ ಬೆಂಕಿ ಕಾಣಿಸಿಕೊಂಡ ಪರಿಣಾಮ ರೆಸ್ಟೋರೆಂಟ್ನಲ್ಲಿದ್ದ ಎಲ್ಲಾ ಗ್ರಾಹಕರು ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಬೆಂಕಿ ನಂದಿಸುತ್ತಿದ್ದು, ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.