ಬೈಕಂಪಾಡಿ: ಬಿಡಿ ಉಪಕರಣ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ - ಬೈಕಂಪಾಡಿ ಕೈಗಾರಿಕಾ ವಲಯ
ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಲೆಮಿನಾ ಬಿಡಿ ಉಪಕರಣ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಘಟಕದಲ್ಲಿ ವಿದ್ಯುತ್ ಕಡಿತಗೊಂಡ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಅಲ್ಲಿಯೇ ಪಕ್ಕದ ಘಟಕದಲ್ಲಿ ಸುಮಾರು 90 ಸಾವಿರ ಲೀ. ಫರ್ನೆಸ್ ಆಯಿಲ್ ಸಂಗ್ರಹವಿದ್ದು, ಇದು ಅಗ್ನಿ ಜ್ವಾಲೆ ಹೆಚ್ಚಲು ಕಾರಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಎಂಸಿಎಫ್ ಹಾಗೂ ಎಂಆರ್‌ಪಿಎಲ್‌ನ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.