ಪ್ರಸಿದ್ಧ ಕಾರ್ಕಳ ಅತ್ತೂರು ಚರ್ಚ್‌ನಲ್ಲಿ ಬೆಂಕಿ ಅವಘಡ - ಚರ್ಚ್‌ನಲ್ಲಿ ಬೆಂಕಿ ಅವಘಡ
ಉಡುಪಿ: ಪ್ರಸಿದ್ಧ ಕಾರ್ಕಳ ಅತ್ತೂರು ಚರ್ಚ್‌ನಲ್ಲಿ ತಡರಾತ್ರಿ ಬೆಂಕಿ ಅವಘಢ ಸಂಭವಿಸಿದೆ. ಚರ್ಚ್ ಮುಂಭಾಗದ ಗೇಟ್ ಬಳಿ ಅಳವಡಿಸಿಲಾದ ಜನರೇಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಜನರೇಟರ್ ಹೊತ್ತಿ ಉರಿದು ಬೆಂಕಿ ಅವಘಢ ಸಂಭವಿಸಿತ್ತು. ಸಂತ್ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ ಮೊದಲ ದಿನದಂದು ಈ ಅವಘಡ ಸಂಭವಿಸಿದೆ. ಸ್ಥಳೀಯರ ಸಮಯ ಪ್ರಜ್ಞೆದಿಂದ ಬಾರಿ ದೊಡ್ಡ ದುರಂತ ತಪ್ಪಿದ್ದು ಕೂಡಲೇ ಅಗ್ನಿಶಾಮಕದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿವಲ್ಲಿ ಯಶಸ್ವಿ ಯಾಗಿದ್ದಾರೆ.