ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹೊತ್ತಿ ಉರಿದ ಕಾರು: ವಿಡಿಯೋ - ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹೊತ್ತಿ ಉರಿದ ಕಾರು
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಿಲ್ಲಿಸಿದ ಕಾರೊಂದು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಮೈದಾನದಲ್ಲಿ ಕಾರು ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಕಾರು ಬೆಂಕಿಗೆ ಆಹುತಿಯಾಗಿದೆ. ಈ ಕಾರು ನಗರದ ಗಿರಣಿಚಾಳ ನಿವಾಸಿ ಶ್ರೀಕಾಂತ್ ಬಾರಕೇರ್ ಎನ್ನುವವರಿಗೆ ಸೇರಿದ್ದಾಗಿದೆ. ಬೇರೆ ಕೆಲಸ ಕಾರಣದಿಂದ ಕಾರನ್ನು ಮೈದಾನದಲ್ಲಿ ನಿಲ್ಲಿಸಿ ಹೋಗಿದ್ದರು. ಆದರೆ ಇಂದು ಬೆಳಗ್ಗೆ ದಿಢೀರನೇ ಕಾರು ಹೊತ್ತಿ ಉರಿದಿದ್ದು, ಯಾರೋ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಕಾರಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು ಕಾರು ಮಾಲೀಕ ಶ್ರೀಕಾಂತ್ ಆರೋಪಿಸಿದ್ದಾರೆ. ಈ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.