ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ: ಐವತ್ತು ಸಾವಿರ ರೂ. ಮೌಲ್ಯದ ಟೊಮ್ಯಾಟೋ ಬಾಕ್ಸ್ಗಳು ಭಸ್ಮ - ಟೊಮೊಟೊ ಕ್ರೇಟ್‌ಗಳಿಗೆ ಬೆಂಕಿ
ಕೋಲಾರ: ಆಕಸ್ಮಿಕವಾಗಿ ಟೊಮ್ಯಾಟೋ ಕ್ರೇಟ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಕ್ರೇಟ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಕೋಲಾರ ಹೊರವಲಯದ ಟೊಮ್ಯಾಟೋ ಮಾರುಕಟ್ಟೆ ಬಳಿ ಜರುಗಿದೆ. ಆಂಧ್ರ ಮೂಲದ ನರಸಿಂಹರಾವ್ ಎಂಬವರಿಗೆ ಸೇರಿದ ಟೊಮ್ಯಾಟೋ ಕ್ರೇಟ್‌ಗಳು ಸುಟ್ಟು ಭಸ್ಮವಾಗಿವೆ. ಇನ್ನು ಕಿಡಿಗೇಡಿಗಳು ಧೂಮಪಾನ ಮಾಡಿ ಬಾಕ್ಸ್ಗಳ ಮೇಲೆ ಹಾಕಿದ್ದರಿಂದ ಅನಾಹುತ ನಡೆದಿದೆ ಎಂದು ಶಂಕಿಸಲಾಗಿದೆ. ಸುಮಾರು ಐವತ್ತು ಸಾವಿರ ರೂ. ಮೌಲ್ಯದ 150ಕ್ಕೂ ಹೆಚ್ಚು ಬಾಕ್ಸ್ಗಳು ಬೆಂಕಿಗಾಹುತಿಯಾಗಿವೆ.