ಭಟ್ಕಳ: ಮಾಸ್ಕ್ ಧರಿಸದೆ ರಸ್ತೆಗಿಳಿದ ವಾಹನ ಸವಾರಿಗೆ ದಂಡದ ಜೊತೆಗೆ ಉಚಿತ ಮಾಸ್ಕ್ ವಿತರಣೆ - ಉಚಿತ ಮಾಸ್ಕ ವಿತರಣೆ
ಭಟ್ಕಳ (ಉತ್ತರ ಕನ್ನಡ): ಸರಕಾರದ ಆದೇಶದಂತೆ ಕೊರೊನಾ ಕಡಿವಾಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಭಟ್ಕಳದ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಓಡಾಡಿದ 28 ಜನರಿಗೆಪೊಲೀಸರು ದಂಡ ವಿಧಿಸಿದ್ದಾರೆ. ತಲಾ ರೂ.100ರಂತೆ 2800 ದಂಡ ವಿಧಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ದೇವರಾಜ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಅವರ ಸಿಬ್ಬಂದಿ ವರ್ಗ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ ದಂಡ ಹಾಕುವ ಕಾರ್ಯಚರಣೆ ಮಾಡಿದ್ದಾರೆ. ನಗರದ ಹಳೆ ಬಸ್ ನಿಲ್ದಾಣದ ಸಮೀಪ ಮಾಸ್ಕ್ ಧರಿಸದೇ ಓಡಾಡಿದ ಬೈಕ್ ಹಾಗೂ ಆಟೋ ಸವಾರರಿಗೆ ದಂಡ ವಿಧಿಸಿ ಉಚಿತ ಮಾಸ್ಕ ವಿತರಿಸಿದ್ದಾರೆ.