ಮಿತಿಮೀರುತ್ತಿರುವ ಕೊರೊನಾ ; ಮಾಸ್ಕ್ ಹಾಕದವರಿಗೆ ಅಧಿಕಾರಿಗಳಿಂದ ದಂಡ - ಚಿಕ್ಕಮಗಳೂರಲ್ಲಿ ಮಾಸ್ಕ್ ಧರಿಸದವರಿಗೆ ದಂಡ
ಚಿಕ್ಕಮಗಳೂರಲ್ಲಿ ಬೆಳಗ್ಗೆಯಿಂದ ಅಧಿಕಾರಿಗಳು ಮಾಸ್ಕ್ ಹಾಕದವರನ್ನ ಹುಡುಕಿ ಹುಡುಕಿ ದಂಡ ವಿಧಿಸುತ್ತಿದ್ದಾರೆ. ಜತೆಗೆ ಎಚ್ಚರಿಕೆಯನ್ನು ಸಹ ನೀಡುತ್ತಿದ್ದಾರೆ. ಏಳು ತಂಡವಾಗಿ ಬೆಳಗ್ಗೆಯಿಂದಲೂ ಅಧಿಕಾರಿಗಳು ಬಸ್, ಕಾರು, ಬೈಕ್, ಆಟೋಗಳನ್ನ ನಿಲ್ಲಿಸಿ ಫೈನ್ ಹಾಕುತ್ತಿದ್ದಾರೆ. ನಗರಸಭೆಯ ಆಯುಕ್ತ ಬಸವರಾಜ್ ಅವರು ಕೂಡ ರಸ್ತೆಗಿಳಿದಿದ್ದು, ಮಾಸ್ಕ್ ಹಾಕದೇ ಬರುತ್ತಿರುವ ವ್ಯಕ್ತಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ಸಹ ನೀಡುತ್ತಿದ್ದಾರೆ.