ಸ್ಟಾರ್ ಪ್ರಚಾರಕರ ಅಬ್ಬರಕ್ಕೆ ಸಾಕ್ಷಿಯಾದ ಹಿರೇಕೆರೂರು.. - ಹಿರೇಕೆರೂರು ಕ್ಷೇತ್ರದ ಉಪ ಚುನಾವಣಾ ಸುದ್ದಿ
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಉಪ ಚುನಾವಣಾ ಅಖಾಡ ಇವತ್ತು ತಾರಾ ಮೆರುಗು ಪಡೆದಿತ್ತು. ಈಗಾಗಲೇ ಕ್ಷೇತ್ರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಹೋಗಿದ್ರು. ಇವತ್ತು ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್, ಮಾಜಿ ಶಾಸಕ ಯು ಬಿ ಬಣಕಾರ ಜತೆ ಸೇರಿ ಕ್ಯಾಂಪೇನ್ ನಡೆಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಬಿ ಹೆಚ್ ಬನ್ನಿಕೋಡ್ ಪರ ಚಿತ್ರನಟಿ ಜಯಮಾಲಾ ಪ್ರಚಾರ ನಡೆಸಿದ್ರು.