ನನ್ನ ವಿರುದ್ಧ ಕೇಸ್ ದಾಖಲಿಸುವುದು ತಪ್ಪು, ಇದೊಂದು ರಾಜಕೀಯ ಪಿತೂರಿ ಎಂದ ಡಿಕೆಶಿ! - ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ
ಬೆಂಗಳೂರು: ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಇಂದು ಸಿಬಿಐ ದಾಳಿ ನಡೆಸಿ, 57 ಲಕ್ಷ ನಗದು ಸೇರಿ ಅಪಾರ ಪ್ರಮಾಣದ ದಾಖಲೆ ವಶಪಡಿಸಿಕೊಂಡಿದೆ. ಸಿಬಿಐ ದಾಳಿ ನಂತರ ಮಾತನಾಡಿರುವ ಡಿಕೆಶಿ ಇದೊಂದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಕೇಸ್ ದಾಖಲು ಮಾಡಿರುವುದು ತಪ್ಪು. ರಾಜ್ಯದಲ್ಲಿ ನಾನು ಏಕೈಕ ರಾಜಕಾರಣಿ ಇಲ್ಲ. ನನ್ನ ಬೆಳವಣಿಗೆ ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ವ್ಯವಸ್ಥೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನನಗೆ ಕಿರುಕಿಳ ನೀಡಲು ಅವರು ಇಷ್ಟಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.