ವಿಶ್ವ ಹೃದಯ ದಿನ.. ಮಣಿಪಾಲಿನ ಕೆಎಂಸಿ ಆಸ್ಪತ್ರೆಯಲ್ಲಿ ವಿಶಿಷ್ಟ ಕಲಾಕೃತಿ ಪ್ರದರ್ಶನ.. - Udupi
ಉಡುಪಿ: ಮಣಿಪಾಲಿನ ಕೆಎಂಸಿ ಆಸ್ಪತ್ರೆಯ ಸಮುದಾಯ ವೇದಿಕೆ ವಿಭಾಗದಿಂದ ವಿಶಿಷ್ಟ ಕಲಾಕೃತಿ ಪ್ರದರ್ಶನಕ್ಕಿಡಲಾಗಿದೆ. ಕಲಾವಿದ ಶ್ರೀನಾಥ್ ಮಣಿಪಾಲ ಅವರು ರಚಿಸಿರುವ ಹೃದಯ ಜಾಗೃತಿ ಕಲಾಕೃತಿಯನ್ನ ಸಾರ್ವಜನಿಕ ಪ್ರದರ್ಶನಕ್ಕೆ ಅನಾವರಣಗೊಳಿಸಲಾಗಿದೆ. ಈ ವಿಭಿನ್ನ ಕಲಾಕೃತಿಯಲ್ಲಿ ಹೃದಯದ ಆರೋಗ್ಯಕ್ಕೆ ಬೇಕಾದ ಆಹಾರ ಪದ್ಧತಿ ಮತ್ತು ಮುಖ್ಯ ಆಹಾರಗಳು ಯಾವುವು ಎಂಬುದನ್ನು ತಿಳಿಸಲಾಗಿದೆ. ದೈಹಿಕ ವ್ಯಾಯಾಮ ಮತ್ತು ಯೋಗದ ಪ್ರಾಮುಖ್ಯತೆ ಕೂಡ ಕಲಾಕೃತಿಯಲ್ಲಿದೆ. ಕಲಾಕೃತಿಯ ಜೊತೆಗೆ ಹೃದಯ ಜಾಗೃತಿ ಸಂದೇಶ ನೀಡುವ ಆಕರ್ಷಕ ಬಿತ್ತಿ ಪತ್ರಗಳನ್ನು ಕೂಡ ಪ್ರದರ್ಶಿಸಲಾಗಿದೆ. ಮಣಿಪಾಲದ ಕೆಎಂಸಿ ಗ್ರೀನ್ಸ್ ಆವರಣದಲ್ಲಿ ಒಂದು ವಾರ ಕಾಲ ಪ್ರದರ್ಶನವಿರಲಿದೆ.