ಭೀಮಾ ತೀರದಲ್ಲಿ ಪ್ರವಾಹ ಭೀತಿ: ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿದೆ ನೀರು - Bhima teera banks
ವಿಜಯಪುರದ ಭೀಮಾ ತೀರದಲ್ಲಿಯೂ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಪರಿಣಾಮ ನಾಡಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದೆ. ಭೀಮಾ ತೀರದ ಉಮರಾಣಿ-ಲವಗಿ ಸೇರಿದಂತೆ ನಾನಾ ಬ್ಯಾರೇಜುಗಳು ಮುಳುಗಡೆ ಹಂತದಲ್ಲಿವೆ. ಸಂಜೆ ವೇಳೆಗೆ ಭೀಮಾ ನದಿಗೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದ್ದು, ಪ್ರವಾಹದ ಆತಂಕದಲ್ಲಿ ಇಲ್ಲಿನ ಗ್ರಾಮಸ್ಥರಿದ್ದಾರೆ.