ಹಾವೇರಿ: ದೆಹಲಿಯಲ್ಲಿ ಕಿಡಿಗೇಡಿಗಳ ಕೃತ್ಯ ಖಂಡಿಸಿ ರೈತ ಸಂಘದಿಂದ ಉಪವಾಸ ಸತ್ಯಾಗ್ರಹ - ರೈತರ ಸತ್ಯಾಗ್ರಹ
ಹಾವೇರಿ: ಗಣರಾಜ್ಯೋತ್ಸವ ದಿನದಂದು ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಹಾವೇರಿಯಲ್ಲಿ ರೈತ ಸಂಘದ ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ರು. ರೈತರು ನ್ಯಾಯಯುತ ಬೇಡಿಕೆಗಾಗಿ ಸತ್ಯಾಗ್ರಹ ನಡೆಸುವಾಗ ರೈತರ ಸತ್ಯಾಗ್ರಹಕ್ಕೆ ಮಸಿ ಬಳಿಯಲು ಕೆಲವು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ರು. ಹೀಗಾಗಿ ಕಿಡಿಗೇಡಿಗಳ ಕೃತ್ಯ ಖಂಡಿಸಿ ಸತ್ಯಕ್ಕೆ ಸಾವಿಲ್ಲ ಎಂಬ ಘೋಷಣೆಯಡಿ ರೈತರು ನಗರದ ಜಿಲ್ಲಾಡಳಿತ ಭವನದ ಮುಂದೆ ಸತ್ಯಾಗ್ರಹ ನಡೆಸಿದ್ರು. ದೆಹಲಿಯಲ್ಲಿನ ರೈತರ ಸತ್ಯಾಗ್ರಹ ಹತ್ತಿಕ್ಕಲು ಕಾಣದ ಕೈಗಳು ಕಿಡಿಗೇಡಿಗಳ ಮೂಲಕ ಕೃತ್ಯ ನಡೆಸ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.